Tuesday, May 8, 2007

ಮತ್ತದೆ ಬೇಸರ...

ಅದೇ ಸಂಜೆ
ಅದೇ ಏಕಾಂತ...
ನಿನ್ನ ಜೊತೆ ಇಲ್ಲದೆ
ಮಾತಿಲ್ಲದೆ ಮನ ವಿಭ್ರಾಂತ....

ನಿಸ್ಸಾರರ ಈ ಕವನ ಓದಿದಾಗಲೆಲ್ಲಾ ಸಂಜೆಯೂ ಆಲ್ಲದ, ರಾತ್ರಿಯೂ ಅಲ್ಲದ ಆ ಸಮಯ ನೆನಪಿಗೆ ಬರುತ್ತದೆ. ಸೂರ್ಯ ಮುಳುಗಿದ ನಂತರದ, ರಾತ್ರಿ ಆವರಿಸುವ ಮೊದಲಿನ ಆ ಸಮಯ. ಅದೊಂದು ಹಗಲು ಅಲ್ಲದ, ರಾತ್ರಿಯೂ ಅಲ್ಲದ ವಿಚಿತ್ರ ಕಾಲ. ನೆನಪುಗಳು ನುಗ್ಗಿ ಬರುವ ಸಂಕ್ರಮಣ ಸಮಯ.

ಇದೇ ದಾಟಿಯ, ಹಿಂದಿಯ ಬಹು ಜನಪ್ರಿಯ.... ಫಿರ್ ವಹಿ ಶಾಮ್... ವಹಿ ಗಂ... ವಹಿ ತನಹಾಯಿ.... ಇದು ನಿಮ್ಮನ್ನು ಕಾಡಿರಬಹುದು. ನೆನಪಿಸಿಕೊಳ್ಳಿ....

2 comments:

Anonymous said...

ಕತ್ತಲ ಕಂಬಳಿಯಲ್ಲಿ ಅಡಗಿಕೊಂಡು, ಸೂರ್ಯನ ಕಣ್ತಪ್ಪಿಸಿ..ಸುತ್ತಿ ಬಳಸಿ ಬರುತ್ತವೆ...

((ನೈಟ್ ಶಿಫ್ಟ್ ಡ್ಯೂಟಿಲಿರುವಾಗಲೂ!?))

dinesh said...

ಬೇಷ್ ರೀ ...ಸರ್ರ.. ಬೇ...ಸರದ ಬಗ್ಗೆ .. ಬೇಸಾಗಿ ..ಬರೆದಿದ್ದಿರಿ...